‘ರಾಮಾಯಣ’ ಚಿತ್ರತಂಡ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು ಯಶ್. ಈ ವೇಳೆ ಯಶ್ ಅವರು ಆಡಿದ ಮಾತುಗಳು ಬಹುವಾಗಿ ಗಮನ ಸೆಳೆದವು. ಅದರಲ್ಲೂ ಇತ್ತೀಚೆಗಷ್ಟೆ ಯಶ್ ಅವರ ‘ಟಾಕ್ಸಿಕ್’ ಸಿನಿಮಾಕ್ಕೆ ಆಂಧ್ರ-ತೆಲಂಗಾಣದಲ್ಲಿ ಸಾಕಷ್ಟು ಋಣಾತ್ಮಕ ವಿಮರ್ಶೆಗಳು, ಉದ್ದೇಶಪೂರ್ವಕ ಟ್ರೋಲಿಂಗ್ ವ್ಯಕ್ತವಾಗಿತ್ತು.