ಭಾರತ ಮ್ಯಾನುಫ್ಯಾಕ್ಚರಿಂಗ್​ನಲ್ಲಿ ಚೀನಾವನ್ನು ನಕಲು ಮಾಡಿದರೆ ನಷ್ಟ. ತಾನು ಸಮರ್ಥವಿರುವ ಉದ್ಯಮಗಳಿಗೆ ಗಮನ ಕೊಡಬೇಕು ಎಂದು ಮಾಧ್ಯಮವೊಂದು ವರದಿ ಮಾಡಿತ್ತು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ವರದಿಗೆ ಅಂಕಿ ಅಂಶಗಳ ಸಹಿತ ಉತ್ತರ ಕೊಟ್ಟಿದ್ದಾರೆ. ಸರ್ಕಾರ ಮೊಬೈಲ್ ಪಿಎಲ್​ಐನಲ್ಲಿ ಕೊಟ್ಟ ಸಬ್ಸಿಡಿಗಿಂತ ಹಲವು ಪಟ್ಟು ಹೆಚ್ಚು ಆದಾಯ ಪಡೆದಿರುವುದನ್ನು ವಿವರಿಸಿದ್ದಾರೆ.