ಶಹಜಹಾನ್‌ಪುರದ ಉದ್ಯಮಿ ವಿನಯ್‌ ಅಗರ್ವಾಲ್‌ ತಮಗೆ ಒಡಹುಟ್ಟಿದ ಸಹೋದರಿಯರಿಲ್ಲ ಎಂಬ ಕೊರತೆ ನೀಗಿಸಿಕೊಳ್ಳಲು 101 ಬಡ ಯುವತಿಯರಿಗೆ ಸಾಮೂಹಿಕ ವಿವಾಹ ಮಾಡಿಸಿದ್ದಾರೆ. 93 ಹಿಂದೂ ಹಾಗೂ 8 ಮುಸ್ಲಿಂ ಯುವತಿಯರಿಗೆ ಅವರವರ ಧರ್ಮದ ಪದ್ಧತಿಯಂತೆ ಮದುವೆ ಮಾಡಿಸಿ, ಗೃಹೋಪಯೋಗಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.