ನವೆಂಬರ್ 14 ರಿಂದ ಆರಂಭವಾಗಲಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಬರೋಡಾ ತಂಡವನ್ನು ಪ್ರಕಟಿಸಲಾಗಿದ್ದು, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಸ್ಥಾನ ಸಿಕ್ಕಿಲ್ಲ. ಕಾಲಿನ ಮೂಳೆ (ಟಿಬಿಯಲ್ ಬೋನ್ ಸ್ಟ್ರೆಸ್) ಗಾಯದಿಂದ ಬಳಲುತ್ತಿರುವ ಅವರು, ಪ್ರಸ್ತುತ ಬಿಸಿಸಿಐ ಮೇಲ್ವಿಚಾರಣೆಯಲ್ಲಿ ರಿಹ್ಯಾಬಿಲಿಟೇಶನ್‌ನಲ್ಲಿದ್ದಾರೆ.