ಇಸ್ರೋ ನಿರ್ಮಿಸಲಿರುವ 'ಭಾರತೀಯ ಅಂತರಿಕ್ಷ ಸ್ಟೇಷನ್' (BAS) ಅತ್ಯಾಧುನಿಕ ರೋಬೋಟಿಕ್ ಸಾಮರ್ಥ್ಯಗಳನ್ನು ಹೊಂದಿರಲಿದೆ. 54 ಟನ್ ತೂಕದ ಈ ನಿಲ್ದಾಣವು 5 ಮಾಡ್ಯೂಲ್‌ಗಳನ್ನು ಒಳಗೊಂಡಿದ್ದು, 2035ರ ವೇಳೆಗೆ ಪೂರ್ಣಪ್ರಮಾಣದಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. ಇದರ ಮೊದಲ ಮಾಡ್ಯೂಲ್ 2028ರಲ್ಲಿ ಉಡಾವಣೆಯಾಗಲಿದೆ.