ಬೆಳಗ್ಗೆ ಎದ್ದಾಗ ದಿಂಬಿನ ಮೇಲೆ ಜೊಲ್ಲು ಕಾಣಿಸುವುದು ಬಾಯಿ ತೆರೆದು ಮಲಗುವುದು, ಮೂಗು ಕಟ್ಟುವಿಕೆ, ಅಲರ್ಜಿ ಅಥವಾ ನಿದ್ರೆಯಲ್ಲಿ ಉಸಿರಾಟದ ತೊಂದರೆಯಿಂದ ಉಂಟಾಗಬಹುದು. ಕೆಲವೊಮ್ಮೆ ಇದು ಸಾಮಾನ್ಯವಾಗಿದ್ದರೂ, ಪದೇಪದೇ ಕಂದುಬಂದರೆ ಗಮನಿಸಬೇಕು. ಜೊಲ್ಲು ಸುರಿಯುವುದರ ಜೊತೆಗೆ ಗೊರಕೆ, ನುಂಗಲು ತೊಂದರೆ ಅಥವಾ ನಿರಂತರ ಆಯಾಸವಿದ್ದರೆ ವೈದ್ಯರನ್ನು ಸಂಪರ್ಕಿಸಿ.