ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಸಿಂಧೂ ನದಿ ನೀರು ಹಂಚಿಕೆ ವಿಚಾರವಾಗಿ ಭಾರತದ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ. "ಪಾಕಿಸ್ತಾನಕ್ಕೆ ಹರಿಯುವ ಸಿಂಧೂ ನದಿಯ ನೀರನ್ನು ತಡೆಯಲು, ತಡೆಯೊಡ್ಡಲು ಅಥವಾ ಹಾದಿ ಬದಲಿಸಲು ಯತ್ನಿಸಿದರೆ ಅದನ್ನು ಯುದ್ಧದ ಕರೆ ಎಂದು ಪರಿಗಣಿಸಲಾಗುವುದು.