ಭಾರತ ಮಹಿಳಾ ತಂಡ ಜಿಂಬಾಬ್ವೆ ವಿರುದ್ಧದ T20 ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿದೆ. ಮೂರನೇ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ಅವರ ಅಜೇಯ 91 ರನ್ ಮತ್ತು ಶಫಾಲಿ ವರ್ಮಾ ಅವರ 69 ರನ್‌ಗಳ ನೆರವಿನಿಂದ ಭಾರತ 216 ರನ್ ಗಳಿಸಿತು. ಜಿಂಬಾಬ್ವೆ ತಂಡವನ್ನು 127 ರನ್‌ಗಳಿಗೆ ಕಟ್ಟಿಹಾಕಿ, 92 ರನ್‌ಗಳ ಭರ್ಜರಿ ಜಯ ದಾಖಲಿಸಿತು.