ವಾಷಿಂಗ್ಟನ್: ಅಮೆರಿಕದಲ್ಲಿ ಇಂದು ಮಧ್ಯಂತರ ಚುನಾವಣೆ (US Midterm Elections) ನಡೆಯುತ್ತಿದೆ. ಭಾರತದ ಸಮಯದ ಪ್ರಕಾರ ಇಂದು ಸಂಜೆಗೆ ಅಮೆರಿಕದ ಹಲವು ರಾಜ್ಯಗಳಲ್ಲಿ ಮತದಾನ ಆರಂಭವಾಗಿದೆ. ಈ ಚುನಾವಣೆಯ ಫಲಿತಾಂಶ ಅಮೆರಿಕದ ರಾಜಕೀಯದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಬಹುದು.