ವೈಮಾನಿಕ ದಾಳಿಯ ವೇಳೆ ರಷ್ಯಾದ ಕ್ಷಿಪಣಿಯೊಂದು ಶಾಲಾ ಕಟ್ಟಡಕ್ಕೆ ನೇರವಾಗಿ ಅಪ್ಪಳಿಸಿದ್ದು, ಇಡೀ ಕಟ್ಟಡವು ಕ್ಷಣಮಾತ್ರದಲ್ಲಿ ನೆಲಸಮವಾಗಿದೆ. ಈ ಶಾಲೆಯಲ್ಲಿದ್ದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರಿಂದ ಸಾವು-ನೋವಿನ ಸಂಖ್ಯೆ ಹೆಚ್ಚಾಗಿದೆ.