2008ರ ಆರ್ಥಿಕ ಹಿಂಜರಿತದಲ್ಲಿ ತಮ್ಮ ಶೇ.90ರಷ್ಟು ಸಂಪತ್ತನ್ನು ಕಳೆದುಕೊಂಡಿದ್ದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ಯಶಸ್ಸಿನ ಪಯಣ ರೋಚಕವಾಗಿದೆ. 19ನೇ ವಯಸ್ಸಿನಲ್ಲಿ ಗ್ಯಾರೇಜ್‌ನಲ್ಲಿ ಉದ್ಯಮ ಆರಂಭಿಸಿದ ಅವರು ಇಂದು ಡಿಎನ್‌ಇಜಿ ಮೂಲಕ ಆಸ್ಕರ್ ಗೆದ್ದಿದ್ದಾರೆ. ಇದೀಗ ಜಾಗತಿಕ ಮಟ್ಟದಲ್ಲಿ 'ರಾಮಾಯಣ' ಮಹಾಕಾವ್ಯವನ್ನು ಸಿನಿಮಾ ರೂಪದಲ್ಲಿ ತೆರೆಗೆ ತರಲು ಸಜ್ಜಾಗಿದ್ದಾರೆ.