ನವೆಂಬರ್ 1 ರಿಂದ LPG ಸಿಲಿಂಡರ್ ವಿತರಣೆ, ಬೆಲೆ ಹಾಗೂ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಬರಲಿವೆ. e-KYC, OTP ಆಧಾರಿತ ವಿತರಣೆ ಕಡ್ಡಾಯವಾಗಿದ್ದು, ಸಿಲಿಂಡರ್ ಬುಕಿಂಗ್ ನಡುವೆ 15 ದಿನಗಳ ಅಂತರ ನಿಯಮ ಮತ್ತಷ್ಟು ಬಿಗಿಯಾಗಲಿದೆ. ಇದರ ನಡುವೆಯೇ, ಹೆಚ್ಚಿದ ಕೆಲಸದ ಒತ್ತಡ ಮತ್ತು ಕಡಿಮೆ ಕಮಿಷನ್‌ಗಾಗಿ ಗ್ಯಾಸ್ ವಿತರಕರು ಪ್ರತಿಭಟನೆಗೆ ಮುಂದಾಗಿದ್ದಾರೆ.