ಡಿಯರ್‌ ಚಂದನ ಏನಾಯಿತು ನಿನಗೆ? ಇತ್ತೀಚೆಗೆ ನಿನ್ನ ಮಾತುಗಳು ಕಡಿಮೆಯಾಗಿವೆ, ನಿನ್ನ ನಗು ದೂರವಾಗಿದೆ. ಈಗ ನಿನ್ನ ಮೌನ ಮಾತ್ರ ನನ್ನನ್ನು ಆವರಿಸಿದೆ. ನಿನ್ನಿಂದ ಒಂದು ಸಣ್ಣ ಮೆಸೇಜ್‌ ಬರಲಿ ಎಂದು ಕಾಯುತ್ತಾ, ಫೋನ್‌ ನೋಡುತ್ತಾ ಕಳೆಯುವ ಪ್ರತಿಯೊಂದು ಕ್ಷಣವೂ ನನಗೆ ಯುಗವಾಗುತ್ತಿದೆ. ನಿನ್ನ ಮೌನದ ಅರ್ಥ ನನಗೆ ತಿಳಿಯುತ್ತಿಲ್ಲ ಚಂದು. ನನ್ನಿಂದ ಏನಾದ್ರೂ ತಪ್ಪಾಗಿದೆಯಾ?