ವಿಶ್ವದ ಅತ್ಯಂತ ಐಷಾರಾಮಿ ಸೌಲಭ್ಯಗಳು ಹಾಗೂ ಅತ್ಯುನ್ನತ ಭದ್ರತೆಗೆ ಹೆಸರಾಗಿರುವ ದುಬೈ ನಗರಕ್ಕೆ ಈಗ ಭಾರತದ ಕ್ರಿಕೆಟ್ ತಾರೆ ಸೂರ್ಯಕುಮಾರ್ ಯಾದವ್ ಹೊಸ ಅತಿಥಿಯಾಗಿ ಸೇರ್ಪಡೆಯಾಗಿದ್ದಾರೆ. ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಅವರ ಹೆಸರಿನ ಐಷಾರಾಮಿ 'ಶಾರುಖ್ಸ್ ರೆಸಿಡೆನ್ಸಸ್' ಟವರ್‌ನಲ್ಲಿ ಸೂರ್ಯಕುಮಾರ್ ವಾಟರ್​​ಫ್ರಂಟ್ ಅಪಾರ್ಟ್‌ಮೆಂಟ್ ಒಂದನ್ನು ಖರೀದಿಸಿದ್ದಾರೆ.