ಬಾಂಡೆ ಎನ್ನುವುದು ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಸುರ್ಜಾಗಢ್ ಕಬ್ಬಿಣದ ಅದಿರು ಗಣಿಯ ಸಮೀಪವಿರುವ ಒಂದು ಕುಗ್ರಾಮ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಓದಿದ ಯುವಕನೊಬ್ಬ ಆಸ್ಟ್ರೇಲಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಾನೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ, ಇಗ್ನಾಸಿಯಸ್ ಪ್ರಕಾಶ್ ಬಡಾ ಎಂಬ ಯುವಕ ಈ ಅಸಾಧ್ಯವನ್ನ ಸಾಧ್ಯವಾಗಿಸಿದ್ದಾರೆ.