ಮಾಜಿ ನಾಯಕ ಎಂ.ಎಸ್. ಧೋನಿ ಯುವಜನರಿಗೆ ದಿನಕ್ಕೆ ಒಂದು ಗಂಟೆ ವ್ಯಾಯಾಮ ಅಥವಾ ಕ್ರೀಡೆಗಾಗಿ ಮೀಸಲಿಡುವಂತೆ ಸಲಹೆ ನೀಡಿದ್ದಾರೆ. ಕಡಿಮೆಯಾಗುತ್ತಿರುವ ದೈಹಿಕ ಚಟುವಟಿಕೆ, ಫಾಸ್ಟ್‌ಫುಡ್‌ ಸೇವನೆ ಮತ್ತು ಬದಲಾಗುತ್ತಿರುವ ಜೀವನಶೈಲಿಯ ನಡುವೆ ಆರೋಗ್ಯಕರ ಆಹಾರ ಹಾಗೂ ನಿಯಮಿತ ವ್ಯಾಯಾಮದ ಮಹತ್ವವನ್ನು ಅವರು ಒತ್ತಿಹೇಳಿದ್ದಾರೆ.