ನಿನ್ನೆ (ಶನಿವಾರ)ದ ಎಪಿಸೋಡಿನಲ್ಲಿ ಸುದೀಪ್ ಅವರು ಸ್ಪರ್ಧಿಗಳ ಮೇಲೆ ತುಸು ಗರಂ ಆಗಿದ್ದರು. ಎರಡೆರಡು ಬಾರಿ ಸ್ಪರ್ಧಿಗಳಿಗೆ ಮನೆಯಿಂದ ಹೊರಗೆ ಹೋಗುತ್ತಿರಿ ಎಂದು ತುಸು ಬೇಸರದಿಂದಲೇ ಹೇಳಿದರು. ಕೆಲವರ ವಿರುದ್ಧ ಪರೋಕ್ಷವಾಗಿ ಕಠಿಣ ಪದಗಳನ್ನು ಬಳಸಿದರು. ಆದರೆ ಭಾನುವಾರದ ಎಪಿಸೋಡ್​​ ಅನ್ನು ಪ್ರತಿ ಬಾರಿಯಂತೆ ನಗುತ್ತಾ, ನಗಿಸುತ್ತಾ ನಡೆಸಿಕೊಟ್ಟರು.