ಮಹಿಳೆಯರು ಪ್ರತಿದಿನ ಖರ್ಜೂರ ಸೇವಿಸುವುದರಿಂದ ದೇಹಕ್ಕೆ ಹಲವು ಪೋಷಕಾಂಶಗಳು ದೊರೆಯುತ್ತವೆ. ಇದರಲ್ಲಿರುವ ನಾರಿನಾಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕಬ್ಬಿಣ, ಮೆಗ್ನೀಷಿಯಂ ಮತ್ತು ಪೊಟ್ಯಾಷಿಯಂ ದೇಹದ ಸಾಮಾನ್ಯ ಆರೋಗ್ಯಕ್ಕೆ ನೆರವಾಗುತ್ತವೆ. ಆದರೆ ಖರ್ಜೂರ ತಿನ್ನುವುದರಿಂದ ಹಾರ್ಮೋನ್ ಸಮಸ್ಯೆಗಳು ಅಥವಾ ಬಂಜೆತನ ವನ್ನು ತಡೆಯಬಹುದು ಎನ್ನಲು ಸಾಧ್ಯವಿಲ್ಲ.