ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ (Gyanesh Kumar) ರಾಜೀನಾಮೆಗೆ ಆಗ್ರಹಿಸಿ ಇಂಡಿಯಾ ಒಕ್ಕೂಟ (INDIA Bloc) ಪ್ರತಿಭಟನೆ ಮುಂದುವರಿಸಿದೆ. ಮಧ್ಯಾಹ್ನ ಭೋಜನಕೂಟ ಮುಗಿಸಿ, ಸಂಜೆ ಆಗುತ್ತಿದ್ದಂತೆ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ನೇತೃತ್ವದಲ್ಲಿ ಒಕ್ಕೂಟ ಸಂಸದರು ಜಂತರ್‌ ಮಂತರ್‌ನತ್ತ ಹೊರಟಿದ್ದಾರೆ.