ದೇಶೀಯ ಟಿ20 ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಬರೋಡಾ ತಂಡ ಪ್ರಕಟಗೊಂಡಿದ್ದು, ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಸ್ಥಾನ ಸಿಕ್ಕಿಲ್ಲ. ಗಾಯದಿಂದ ಬಳಲುತ್ತಿರುವ ಅವರು ಚೇತರಿಕೆಯ ಹಂತದಲ್ಲಿದ್ದು, ಕ್ರಿಕೆಟ್‌ಗೆ ಮರಳುವಿಕೆ ವಿಳಂಬವಾಗಲಿದೆ.