ಬೆಂಗಳೂರು: ದೇಶದಲ್ಲೇ ಹಾವು ಕಡಿತ ಪ್ರಕರಣದಲ್ಲಿ ಕರ್ನಾಟಕ (Karnataka) ಮುಂಚೂಣಿಯಲ್ಲಿದೆ. ಕಳೆದ 10 ತಿಂಗಳಲ್ಲಿ 191 ಮಂದಿ ಹಾವು ಕಡಿತಕ್ಕೆ ಬಲಿಯಾಗಿದ್ದಾರೆ. ಭಾರತದಲ್ಲಿ ಈ ವರ್ಷ ಜನವರಿ 1ರಿಂದ ಇಲ್ಲಿಯವರೆಗೆ 16,229 ಮಂದಿಗೆ ಹಾವು ಕಚ್ಚಿದ್ದು, ಇವರಲ್ಲಿ 191 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.