ಬಿಗ್ ಬಾಸ್ ಕನ್ನಡ 13 ರಲ್ಲಿ ಯಶಸ್ ಈ ವಾರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಎಲ್ಲ ಟಾಸ್ಕ್‌ಗಳಲ್ಲಿ ಅತ್ಯುತ್ತಮವಾಗಿ ಭಾಗವಹಿಸಿ, ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಪಜಲ್ ಗೇಮ್‌ನಲ್ಲಿ ದೇಹದ ಸಮತೋಲನ ಕಾಯ್ದುಕೊಂಡು, ಗೋಲ್ಡ್ ಕಾಯಿನ್ ಹಂಚಿಕೆಯಲ್ಲೂ ಪ್ರಾಮಾಣಿಕವಾಗಿ ಆಡಿದ್ದಾರೆ. ಈ ಕಾರಣಕ್ಕೆ ಅವರನ್ನು ಗೋಲ್ಡ್ ಪರ್ಫಾರ್ಮರ್ ಆಫ್ ದಿ ವೀಕ್ ಎಂದು ಘೋಷಿಸಲಾಗಿದೆ.