ರಾಜ್ಯದ ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್‌ಪಿಒ) ಆರ್ಥಿಕವಾಗಿ ಸಶಕ್ತಗೊಳಿಸಲು 'ವಾಧ್ವಾನಿ ಎಫ್‌ಪಿಒ ಎಂಟರ್‌ಪ್ರೆನ್ಯೂರ್‌ಶಿಪ್ ಪ್ರೋಗ್ರಾಂ' ಆರಂಭಿಸಲಾಗಿದೆ. ಮೊದಲ ಹಂತವಾಗಿ 27 ಎಫ್‌ಪಿಒಗಳನ್ನು ಆಯ್ಕೆ ಮಾಡಲಾಗಿದ್ದು, ರೈತರನ್ನು ಸ್ವಯಂ ಉದ್ಯಮಿಗಳನ್ನಾಗಿ ಬೆಳೆಸಲು 10 ವಾರಗಳ ವಿಶೇಷ ತರಬೇತಿ ನೀಡಲಾಗುತ್ತದೆ.