ಕಲಬುರಗಿ: ರಾಜ್ಯದ ಆ್ಯಂಬುಲೆನ್ಸ್‌ ವ್ಯವಸ್ಥೆಗೆ (ವಿಶೇಷವಾಗಿ 108 ಸೇವೆಗೆ) ಮೇಜರ್ ಸರ್ಜರಿ ಮಾಡಲಾಗುತ್ತಿದೆ. ಮುಂಬರುವ ಡಿಸೆಂಬರ್ ವೇಳೆಗೆ 750 ಹೊಸ ಆ್ಯಂಬುಲೆನ್ಸ್‌ ಸೇರ್ಪಡೆ ಜತೆಗೆ ಹೊಸ ಆ್ಯಂಬುಲೆನ್ಸ್ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದರು.