'ಬಿಗ್ ಬಾಸ್' ಖ್ಯಾತಿಯ ನಟಿ ಸ್ಪಂದನಾ ಸೋಮಣ್ಣ ಅವರು ತಮ್ಮ ಆರು ವರ್ಷಗಳ ಪ್ರೇಮಿಯಾದ ವರುಣ್ ಮುನಿರಾಜು ಜೊತೆ ಹಸೆಮಣೆ ಏರಿದ್ದಾರೆ. ಮದುವೆಯ ನಂತರ ಅವರು ಫ್ಯಾಷನ್ ಕ್ಷೇತ್ರದಲ್ಲಿ ಬ್ಯುಸಿನೆಸ್ ಮಾಡುವ ಯೋಜನೆ ಹೊಂದಿದ್ದು, ಒಳ್ಳೆಯ ಪ್ರಾಜೆಕ್ಟ್ ಸಿಕ್ಕರೆ ನಟನೆ ಮುಂದುವರೆಸಲಿದ್ದಾರೆ.