ಅಮೆರಿಕದ ಮ್ಯಾಸಚೂಸೆಟ್ಸ್‌ನ ಕೇಪ್ ಕಾಡ್‌ನ ಸಂರಕ್ಷಿತ ಪ್ರದೇಶದಲ್ಲಿ ಎರಡು ತಲೆಗಳ ಅಪರೂಪದ ಆಮೆ ಮರಿಯೊಂದು ಪತ್ತೆಯಾಗಿದೆ. ಸಾಮಾನ್ಯವಾಗಿ ಆಮೆ ಮರಿಗಳು ಹುಟ್ಟುವ ಗೂಡಿನಲ್ಲಿ ಕಂಡುಬಂದ ಈ ವಿಚಿತ್ರ ಮರಿ ಈಗ ವನ್ಯಜೀವಿ ವೈದ್ಯರ ಆರೈಕೆಯಲ್ಲಿದೆ. ಕೇವಲ 5.2 ಗ್ರಾಂ ತೂಕವಿರುವ ಈ ಪುಟ್ಟ ಜೀವಿ, ತನ್ನ ಎರಡು ತಲೆಗಳಿಂದಾಗಿ ವನ್ಯಜೀವಿ ತಜ್ಞರ ಗಮನ ಸೆಳೆದಿದೆ.