ಕೆಜಿಎಫ್‌ನ ಯಶ್ ಹಾಗೂ ಕಾಂತಾರದ ರಿಷಬ್ ಶೆಟ್ಟಿ ನಂತರ ಇದೀಗ 'ಪ್ರೇಮದ ಊರಲಿ' ಚಿತ್ರದ ನಾಯಕ ಶ್ರೀರಾಮ್ ಪರಭಾಷಿಗರ ಗಮನ ಸೆಳೆದಿದ್ದಾರೆ. ಆಂಧ್ರಪ್ರದೇಶದಲ್ಲಿ ಈ ಚಿತ್ರದ ಡಬ್ಬಿಂಗ್ ನೋಡಿದ ತೆಲುಗು ಪ್ರೇಕ್ಷಕರು ಶ್ರೀರಾಮ್ ಅವರನ್ನು 'ಯಂಗ್ ಪ್ರಭಾಸ್' ಎಂದು ಕರೆದು ಪ್ರಶಂಸಿಸಿದ್ದಾರೆ.