ಶೈನ್‌ ಶೆಟ್ಟಿ, ತನ್ವಿ ರಾಮ್‌, ಕೃತಿ ಮುಂತಾದವರು ನಟಿಸಿರುವ ‘ಶಂಕರಾಭರಣ’ ಸಿನಿಮಾದ ಪ್ರಚಾರವನ್ನು ರಾಜ್ಯಾದ್ಯಂತ ಮಾಡಲಾಗುತ್ತಿದೆ. ಶೈನ್ ಶೆಟ್ಟಿ ಅವರು ಬಸ್ ಓಡಿಸುವ ಮೂಲಕ ಹಲವು ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಚಿತ್ರತಂಡಕ್ಕೆ ರಾಜ್ ಬಿ. ಶೆಟ್ಟಿ ಅವರು ಸಹ ಬೆಂಬಲ ಸೂಚಿಸಿದ್ದಾರೆ.