ಉತ್ತರ ಪ್ರದೇಶದ ಲಖನೌನಲ್ಲಿ ನಡೆದ ಮಿಸಸ್ ಯೂನಿಟಿ ವರ್ಲ್ಡ್ 2026 ಸ್ಪರ್ಧೆಯಲ್ಲಿ ಭಾರತದ ಆಶಾ ದೀಪಿಕಾ ಅಟ್ಟಲೂರಿ ಪ್ರಶಸ್ತಿ ಗೆದ್ದಿದ್ದಾರೆ. ಆಂಧ್ರಪ್ರದೇಶದಲ್ಲಿ ಜನಿಸಿ ಅಮೆರಿಕದಲ್ಲಿ ನೆಲೆಸಿರುವ ಇವರು, ರಷ್ಯಾದಲ್ಲಿ ತಯಾರಾದ ವಿಶೇಷ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಈ ಗೆಲುವು ಇಡೀ ದೇಶಕ್ಕೆ ಹೆಮ್ಮೆ ತಂದಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.