ಮೂರು ತಿಂಗಳಿನಿಂದ ನಾಪತ್ತೆಯಾಗಿದ್ದ ಪತ್ನಿಗಾಗಿ ಹುಡುಕಾಡುತ್ತಿದ್ದ ಪತಿಗೆ ಆಕೆ ಭಿಕ್ಷುಕಿಯ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ. ಮತಿಭ್ರಮಣೆಯಿಂದ ಕೂಡಿದ್ದ ಪತ್ನಿಯನ್ನು ನೋಡಿ ಪತಿ ಕಣ್ಣೀರಿಡುತ್ತಾ ತಬ್ಬಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇದು ಇಂದಿಗೂ ದಾಂಪತ್ಯ ಸಂಬಂಧಗಳಿಗೆ ಇರುವ ಬೆಲೆಯನ್ನು ಎತ್ತಿ ತೋರಿಸುತ್ತದೆ.