ಆಂಧ್ರಪ್ರದೇಶದ ಬರಪೀಡಿತ ರಾಯಲಸೀಮಾವನ್ನು 'ಜಗತ್ತಿನ ಹಣ್ಣಿನ ಬಟ್ಟಲು' ಮಾಡಲು ₹1 ಲಕ್ಷ ಕೋಟಿ ವೆಚ್ಚದ ಜಾಗತಿಕ ತೋಟಗಾರಿಕಾ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ರಿಲಯನ್ಸ್ ಸಹಭಾಗಿತ್ವದಲ್ಲಿ 'ಇಂಡಿಯನ್ ಸ್ಕೂಲ್ ಆಫ್ ಅಗ್ರಿಕಲ್ಚರ್' ಸ್ಥಾಪನೆಯಾಗಲಿದ್ದು, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಲಾಗುವುದು.