ಬಿಗ್‌ಬಾಸ್ ವೇದಿಕೆಯಲ್ಲಿ ಕಣ್ಣೀರಿಟ್ಟಿದ್ದ ಕಿಚ್ಚ ಸುದೀಪ್ ತಾವು ಕಂಟೆಂಟ್ ಗೋಸ್ಕರ ಅತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾಯಿಯ ನೆನಪಾಗಿ ಅತ್ತಿರುವುದಾಗಿ ತಿಳಿಸಿರುವ ಸುದೀಪ್ ಅವರ ಈ ಭಾವನಾತ್ಮಕ ಮಾತುಗಳು ವೀಕ್ಷಕರ ಹಾಗೂ ಸ್ಪರ್ಧಿಗಳ ಕಣ್ಣಲ್ಲಿ ನೀರು ತರಿಸಿದ್ದು, ಈ ವಿಚಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.