ರಣಜಿ ಟ್ರೋಫಿ 2026-27 ರ ಗುಂಪು ಹಂತದ ಪಂದ್ಯದಲ್ಲಿ ಗುಜರಾತ್ ವಿರುದ್ಧ ದೆಹಲಿ ಭರ್ಜರಿ ಪ್ರದರ್ಶನ ನೀಡಿದೆ. ಮೊದಲ ದಿನದ ಅಂತ್ಯಕ್ಕೆ ದೆಹಲಿ 4 ವಿಕೆಟ್‌ಗೆ 381 ರನ್ ಗಳಿಸಿದ್ದು, ಪ್ರಿಯಾಂಶ ಆರ್ಯ 199 ರನ್ ಬಾರಿಸಿ ದ್ವಿಶತಕ ವಂಚಿತರಾದರು. ನಾಯಕ ಆಯುಷ್ ಬದೋನಿ 115 ರನ್ ಸಿಡಿಸಿ ಶತಕದ ಜೊತೆಯಾಟವಾಡಿ ತಂಡವನ್ನು ಉತ್ತಮ ಸ್ಥಿತಿಗೆ ತಂದರು.