ರಂಗಾಯಣ ರಘು ಅವರು ‘ಪ್ರೇಮದ ಊರಲ್ಲಿ’ ಸಿನಿಮಾನಲ್ಲಿ ಬಹಳ ಪ್ರಮುಖವಾದ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರರಂಗದ ಹಲವು ಗೆಳೆಯರು ಈ ಬಗ್ಗೆ ರಂಗಾಯಣ ರಘು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರಂತೆ, ಜೊತೆಗೆ ‘ಇಡೀ ಇಂಡಸ್ಟ್ರಿಗೆ ಅಪ್ಪ ಆಗ್ಬಿಟ್ಟಿದ್ದೀಯ’ ಎಂದು ರೇಗಿಸುತ್ತಾರಂತೆ. ಇತ್ತೀಚೆಗೆ ರಂಗಾಯಣ ರಘು ಅವರು ತಂದೆಯ ಪಾತ್ರಗಳಲ್ಲಿ ಹೆಚ್ಚಾಗಿ ನಟನೆ ಮಾಡುತ್ತಿದ್ದಾರೆ.