ನಾವು ಸಾಮಾನ್ಯವಾಗಿ ಅಡುಗೆಮನೆಯ ಸ್ಲ್ಯಾಬ್ ಮತ್ತು ಪಾತ್ರೆಗಳನ್ನು ತೊಳೆಯುವುದರ ಕಡೆಗೆ ಮಾತ್ರ ಗಮನ ಹರಿಸುತ್ತೇವೆ. ಆದರೆ ಇದು ಸಾಲದು. ಅಡುಗೆಮನೆಯ ಬಟ್ಟೆ, ಪಾತ್ರೆ ತೊಳೆಯುವ ಸ್ಪಾಂಜ್ ಮತ್ತು ಸಿಂಕ್‌ನಲ್ಲಿ ಸಾಕಷ್ಟು ಬ್ಯಾಕ್ಟೀರಿಯಾಗಳು ಸೇರಿಕೊಳ್ಳುತ್ತವೆ. ಇವುಗಳನ್ನು ನಾವು ನಿರ್ಲಕ್ಷ್ಯ ಮಾಡಬಾರದು.