ಕಲಬುರಗಿ: ‘ಹಲವು ಕ್ರಿಮಿನಲ್‌ ಪ್ರಕರಣ ಹಾಗೂ ಅತ್ಯಾಚಾರ ಆರೋಪದಲ್ಲಿ ಜೈಲಿಗೆ ಹೋಗಿ ಬಂದ ಆರೋಪಿಯನ್ನು ಕೆಆರ್‌ಡಿಸಿಎಲ್‌ ಅಧಿಕಾರಿಗಳು ವಾಗ್ದರಿ–ರಿಬ್ಬನಪಲ್ಲಿ ಹೆದ್ದಾರಿಯ ಸೇಡಂ ತಾಲ್ಲೂಕಿನ ಆಡಕಿ ಟೋಲ್‌ ಗೇಟ್‌ನಲ್ಲಿ ನೇಮಕ ಮಾಡಿಕೊಂಡಿದ್ದಾರೆ. ಶೀಘ್ರದಲ್ಲಿ ಆರೋಪಿಯನ್ನು ಕೆಲಸದಿಂದ ವಜಾ ಮಾಡಬೇಕು’ ಎಂದು ಪ್ರಜಾಶಕ್ತಿ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಮೌನೇಶ ಬಡಗೇರ ಆಗ್ರಹ...