ಹೈದರಾಬಾದ್: ಬಾಂಗ್ಲಾದೇಶದಿಂದ (Bangladesh) ವಿದೇಶಿ ಮೂಲದ ಚಿನ್ನವನ್ನು ಕಳ್ಳಸಾಗಣೆ ಮಾಡಿ, ಕೋಲ್ಕತ್ತಾ ಮೂಲಕ ಹೈದರಾಬಾದ್‌ಗೆ (Hyderabad) ಸಾಗಿಸುತ್ತಿದ್ದ ಆರೋಪದ ಮೇಲೆ ಐವರು ಆರೋಪಿಗಳನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಅಧಿಕಾರಿಗಳು ಬಂಧಿಸಿದ್ದಾರೆ.