ಹಾಲಿವುಡ್ ಚಿತ್ರ ಪ್ರೇಕ್ಷಕರಿಗೆ ಹೆಚ್ಚು ಪರಿಚಯವಿಲ್ಲದ ನಟಿ ಡಕೋಟಾ ಜಾನ್ಸನ್ (Dakota Johnson). ಅಮೆರಿಕದ ನಟಿಯಾಗಿ ಹೆಸರು ಗಳಿಸಿರುವ ಈ ಸುಂದರ ತಾರೆ, ನಟನೆಯಲ್ಲಿ ಮತ್ತು ಸಂಗೀತ ಕ್ಷೇತ್ರದಲ್ಲಿಯೂ ಪ್ರತಿಭಾವಂತೆಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಶಸ್ತಿ, ಪುರಸ್ಕಾರಗಳನ್ನು ಬಾಚಿಕೊಂಡು ಕಳೆದೊಂದು ದಶಕದಿಂದ ಚಿತ್ರರಂಗದಲ್ಲಿ ಹಲವು ಸಂಚಲನಗಳಿಗೆ ಕಾರಣರಾಗಿದ್ದಾರೆ.