ಐಫೋನ್ ಮತ್ತು ಆ್ಯಪಲ್ ವಾಚ್‌ಗಳಲ್ಲಿ ಪೇಟೆಂಟ್ ನಿಯಮ ಉಲ್ಲಂಘಿಸಿ ತಂತ್ರಜ್ಞಾನ ಬಳಸಿದ ಆರೋಪದಡಿ ಆ್ಯಪಲ್ ಕಂಪನಿಗೆ ಅಮೆರಿಕದ ನ್ಯಾಯಾಲಯ 54,000 ಕೋಟಿ ರೂ. ದಂಡ ವಿಧಿಸಿದೆ. ಟ್ಯಾಕ್ಷನ್ ಟೆಕ್ನಾಲಜಿ ಕಂಪನಿಯು ಹೂಡಿದ್ದ ಈ ಮೊಕದ್ದಮೆಯಲ್ಲಿ ಜ್ಯೂರಿ ಒಮ್ಮತದ ತೀರ್ಪು ನೀಡಿದೆ. ಆದರೆ ಆ್ಯಪಲ್ ಈ ತೀರ್ಪನ್ನು ವಿರೋಧಿಸಿದ್ದು, ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದೆ.