ಬೆಂಗಳೂರು: ಟ್ರೆಕ್ಕಿಂಗ್ (Trekking) ವೇಳೆ ಈಜಲು ಹೋದ ಟೆಕ್ಕಿ (Techie) ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಬೆಂಗಳೂರು ಹೊರವಲಯ ಜಿಗಣಿ (Jigani) ಬಳಿಯ ಯಲ್ಲಮ್ಮನ ದೊಡ್ಡಯ್ಯ ಕಲ್ಲು ಕ್ವಾರಿಯಲ್ಲಿ ನಡೆದಿದೆ. ಆಂಧ್ರ ಪ್ರದೇಶ ಮೂಲದ ವಿನಯ್ (30) ನಾಪತ್ತೆಯಾದ ಟೆಕ್ಕಿ. ಸಾಫ್ಟ್ವೇರ್ ಉದ್ಯೋಗಿಯಾಗಿದ್ದ ವಿನಯ್ ಬೆಂಗಳೂರಿನ ಹಲಸೂರಿನಲ್ಲಿ ವಾಸವಿದ್ದರು.