ಬ್ಯಾಟ್ ಮತ್ತು ಬಾಲ್ ಹಿಡಿದು ಮೈದಾನಕ್ಕಿಳಿಯುವ ಆಟಗಾರರಷ್ಟೇ ಅಲ್ಲ, ಗ್ಯಾಲರಿಯಲ್ಲಿ ಕುಳಿತು ಚಪ್ಪಾಳೆ ತಟ್ಟುವ ಪ್ರತಿಯೊಬ್ಬ ಅಭಿಮಾನಿಯೂ ಕ್ರಿಕೆಟ್‌ನ ನಿಜವಾದ ಜೀವಾಳ. ಆದರೆ, ದೈಹಿಕ ಮಿತಿಗಳ ಕಾರಣದಿಂದ ಕ್ರೀಡಾಂಗಣದಿಂದ ದೂರ ಉಳಿಯುತ್ತಿದ್ದ 'ದಿವ್ಯಾಂಗ' ಕ್ರಿಕೆಟ್ ಪ್ರೇಮಿಗಳನ್ನು ಹೆಮ್ಮೆಯಿಂದ ಬರಮಾಡಿಕೊಳ್ಳಲು ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ಮುಂದಾಗಿದೆ.