ಹಬ್ಬ, ಮದುವೆ ಸಮಾರಂಭದ ಸಮಯದಲ್ಲಿ ಸೀರೆಯ ನೆರಿಗೆಗಳು ಸರಿಯಾಗಿ ಮೂಡದಿದ್ದರೆ, ಇಡೀ ಲುಕ್ ಹಾಳಾಗಬಹುದು. ನಿಮ್ಮ ಸೀರೆಯ ನೆರಿಗೆಗಳೂ ಪದೇ ಪದೆ ಹಾಳಾಗುತ್ತಿದ್ದರೆ, ಮನೆಯಲ್ಲಿರುವ ಬಾಚಣಿಗೆಯೇ ನಿಮಗೆ ಸಹಾಯ ಮಾಡಬಹುದು. ಬಾಚಣಿಗೆಯ ಸಹಾಯದಿಂದ ಯಾವುದೇ ತೊಂದರೆಯಿಲ್ಲದೆ, ಸಮಾನ ಅಳತೆಯ ಅಚ್ಚುಕಟ್ಟಾದ ಸೀರೆಯ ನೆರಿಗೆಗಳನ್ನು ಹಾಕಬಹುದು.