ಪಡ್ಡೆಹುಲಿ ಖ್ಯಾತಿಯ ಶ್ರೇಯಸ್ ಮಂಜು ನಾಯಕನಾಗಿ ನಟಿಸಿರುವ ಚಿತ್ರ `ದಿಲ್‌ದಾರ್’. ಮಧು ಗೌಡ ಗಂಗೂರ್ ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರದ ‘ಕೂಲ್ ಬ್ರದರ್’ ಹಾಡನ್ನು ನಟ ಶ್ರೀಮುರಳಿ ಅವರು ಬಿಡುಗಡೆ ಮಾಡಿದರು. ಈಗಾಗಲೇ ಮಾಸ್ ಪಾತ್ರಗಳ ಮೂಲಕ ಗಮನ ಸೆಳೆದಿರುವ ಶ್ರೇಯಸ್ ಮಂಜು, ಈ ಚಿತ್ರದಲ್ಲಿ ಮತ್ತೊಂದು ಹಂತದ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.