ಅಮೆರಿಕದ ಇಲಿನಾಯ್ಸ್‌ನ ಪಾಲಟೈನ್‌ನಲ್ಲಿರುವ ಹಿಂದೂ ದೇವಾಲಯವೊಂದನ್ನು ಗುರಿಯಾಗಿಸಿಕೊಂಡು ನಡೆಸಲು ಉದ್ದೇಶಿಸಲಾಗಿದ್ದ ಸಾಮೂಹಿಕ ಗುಂಡಿನ ದಾಳಿಯ ಸಂಚನ್ನು ಅಮೆರಿಕದ ಭದ್ರತಾ ಸಂಸ್ಥೆಗಳು ವಿಫಲಗೊಳಿಸಿದ ಬೆನ್ನಲ್ಲೇ, ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಹೊರಡಿಸಿದೆ.