ಕನ್ನಡ ಜೀ5 ಓಟಿಟಿ ವೇದಿಕೆಯು ತನ್ನ ಬಹುನಿರೀಕ್ಷಿತ ಸೈಕಲಾಜಿಕಲ್ ಮಿಸ್ಟ್ರಿ ಥ್ರಿಲ್ಲರ್ ವೆಬ್ ಸರಣಿ ‘ಅಯ್ಯನ ಮನೆ’ಯ ಎರಡನೇ ಸೀಸನ್ ಅನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದೆ. ರಮೇಶ್ ಇಂದಿರಾ ಅವರ ನಿರ್ದೇಶನ ಮತ್ತು ಶ್ರುತಿ ನಾಯ್ಡು ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಹೊಸ ಸರಣಿಯು ಒಟ್ಟು 6 ಕಂತುಗಳಲ್ಲಿ ಮೂಡಿಬರಲಿದೆ.