'ಬಿಗ್‌ ಬಾಸ್‌ ಕನ್ನಡ 13' (Bigg Boss Kannada 13) ಇದೀಗ ಏಳನೇ ವಾರಕ್ಕೆ ಕಾಲಿಟ್ಟಿದೆ. ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿರುವ ಈ ಶೋನಲ್ಲಿ ಆರನೇ ವಾರದ 'ಲೂಟಿಕೋರರು ಮತ್ತು ರಕ್ಷಕರು' ಟಾಸ್ಕ್‌ ಭಾರೀ ಸದ್ದು ಮಾಡಿದೆ. ಮನೆಯೊಳಗೆ ಮ್ಯೂಸಿಯಂ ನಿರ್ಮಿಸಿ, ಬೆಲೆಬಾಳುವ ವಸ್ತುಗಳನ್ನು ಕಾಪಾಡುವ ಜವಾಬ್ದಾರಿಯನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು.