ಸೋಷಲ್ ಮೀಡಿಯಾದಲ್ಲಿ ಸಿನಿತಾರೆಯರ ಮೇಲಿನ ಟ್ರೋಲಿಂಗ್‌ಗಳು ಹೆಚ್ಚಾಗಿವೆ. ಮುಖ್ಯವಾಗಿ ಮಹಿಳಾ ನಟಿಯರು ಮತ್ತು ನಾಯಕಿಯರ ದೇಹದ ಆಕಾರ, ಉಡುಗೆ-ತೊಡುಗೆಗಳ ಬಗ್ಗೆ ಆಸಾಮಿಗಳು ಕೆಟ್ಟ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಐಶ್ವರ್ಯ ರೈಯವರಿಂದ ಹಿಡಿದು ಹೊಸ ನಾಯಕಿಯರವರೆಗೆ ಇಂತಹ ಘಟನೆಗಳಿಗೆ ಬಲಿಯಾಗುತ್ತಿರುವುದು ದುರದೃಷ್ಟಕರ.