ಬೆಂಗಳೂರಿನ ಕೇಶವ್ ಪ್ರಸಾದ್ ತಮ್ಮ ಸ್ವಂತ ಕಾರಿನಲ್ಲಿ ಬೆಂಗಳೂರಿನಿಂದ ಲಂಡನ್‌ಗೆ ಪ್ರಯಾಣಿಸಿ, ಮರಳಿ ಬೆಂಗಳೂರಿಗೆ ಆಗಮಿಸುವ ಮೂಲಕ ಅಸಾಮಾನ್ಯ ಸಾಹಸ ಮೆರೆದಿದ್ದಾರೆ. 85 ದಿನಗಳಲ್ಲಿ 27 ದೇಶಗಳನ್ನು ಹಾದು, 25,000 ಕಿ.ಮೀ ದೂರ ಕ್ರಮಿಸಿದ್ದು, ಈ ಐತಿಹಾಸಿಕ ರಸ್ತೆ ಪಯಣ ಆಗಸ್ಟ್ 25ಕ್ಕೆ ಮುಕ್ತಾಯಗೊಂಡಿದೆ.