ಅವರೊಟ್ಟಿಗೆ ಅವರ ಪತ್ನಿ ಮತ್ತು ಮಗ ಸಹ ಇದ್ದರು. ಈ ವೇಳೆ ವಸಿಷ್ಠ ಸಿಂಹ ಅವರ ಹೊಸ ಸಿನಿಮಾದ ಪೋಸ್ಟರ್ ಮತ್ತು ಟೈಟಲ್ ಅನಾವರಣವೂ ಸಹ ನಡೆಯಿತು. ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ ನಟ ವಸಿಷ್ಠ ಸಿಂಹ, ‘ನಿಮ್ಮ ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲ. ನೀವು ನನ್ನನ್ನು ಎಷ್ಟು ಪ್ರೀತಿಸುತ್ತೀರೋ ಅದಕ್ಕಿಂತಲೂ ಹೆಚ್ಚು ನಾನು ನಿನ್ನನ್ನು ಪ್ರೀತಿ ಮಾಡುತ್ತೇನೆ’ ಎಂದರು.