ಬಿಗ್ ಬಾಸ್ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್‌ನಲ್ಲಿ ಬಿದ್ದು ಮೈಕ್ ಹಾಳು ಮಾಡಿದ ಸ್ಪರ್ಧಿ ಪ್ರಶಾಂತ್‌ಗೆ ಕಿಚ್ಚ ಸುದೀಪ್ ತಮಾಷೆಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮೈಕ್ ಬೆಲೆ ಎರಡೂವರೆ ಲಕ್ಷ ರೂಪಾಯಿ ಎಂದು ಸುದೀಪ್ ಬಹಿರಂಗಪಡಿಸಿದ್ದು, ನಿಯಮ ಮೀರಿ ಪಿಸು ಧ್ವನಿಯಲ್ಲಿ ಮಾತನಾಡಿದ ಆಸಿಯಾ ವಿರುದ್ಧವೂ ವಾರದ ಕಥೆಯಲ್ಲಿ ಗರಂ ಆಗಿದ್ದಾರೆ.